ಮಂಗಳೂರು, ಮಾ.೮: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಂಬೆ ಸಮೀಪದ ಅದ್ಯಪಾಡಿ ಎಂಬಲ್ಲಿ ಮಸೀದಿಗೆ ಸಂಬಂಧಿ ಸಿದ ನಿರ್ಮಾಣ ಹಂತದ ಕಟ್ಟಡವೊಂದನ್ನು ಶನಿವಾರ ತಡ ರಾತ್ರಿ ದುಷ್ಕರ್ಮಿಗಳು ಕೆಡವಿ ಹಾಕಿದ ಬಗ್ಗೆ ವರದಿಯಾಗಿದೆ.
ಅದ್ಯಪಾಡಿ ಮಸೀದಿಯ ಅಧೀನದಲಿ ರುವ ಈ ಜಾಗದಲ್ಲಿ ಸ್ಥಳೀಯ ಯಂಗ್‌ಸ್ಟರ್ ಫ್ರೆಂಡ್ಸ್ ಅಸೋಸಿಯೇ ಶನ್ ೮ ತಿಂಗಳಿನಿಂದ ಕಟ್ಟಡವೊಂದು ನಿರ್ಮಿಸುತ್ತಿತ್ತು. ಕಟ್ಟಡ ನಿರ್ಮಾಣಕ್ಕೆ ಪಂಚಾಯತ್‌ನಿಂದ ಒಪ್ಪಿಗೆ ಪತ್ರವನ್ನೂ ಪಡೆಯಲಾಗಿತ್ತು. ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಿಂದ ಬಂದ ಸೂಚನೆಯ ಮೇರೆಗೆ ಪಂಚಾ ಯತ್ ಕಾರ್ಯದರ್ಶಿ ಕಟ್ಟಡ ನಿರ್ಮಾ ಣಕ್ಕೆ ತಾತ್ಕಾಲಿಕ ತಡೆ ನೀಡಿದರು. ತದನಂತರದ ಬೆಳವಣಿಗೆಯಲ್ಲಿ ನಿರ್ಮಾಣ ಹಂತದ ಕಟ್ಟಡವನ್ನು ರಾತ್ರೋ ರಾತ್ರಿ ನೆಲಸಮ ಮಾಡಲಾ ಗಿದ್ದು, ರವಿವಾರ ಬೆಳಗ್ಗೆ ಈ ವಿಷಯ ಬೆಳಕಿಗೆ ಬಂತು.
ತಕ್ಷಣ ಪಣಂಬೂರು ಡಿವೈಎಸ್‌ಪಿ ಗಿರೀಶ್, ಇನ್ಸ್‌ಪೆಕ್ಟರ್ ವೆಲೆಂಟಿನ್ ಡಿಸೋಜ, ಸಬ್ ಇನ್ಸ್‌ಪೆಕ್ಟರ್ ಪ್ರಮೋದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಮಾಡ, ತಾಲೂಕು ಪಂಚಾಯತ್ ಸದಸ್ಯ ಶಿವಪ್ಪ ಬಂಗೇರ, ಸ್ಥಳೀಯ ಮುಖಂಡರಾದ ಗಿರಿಯಪ್ಪ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ, ಯಂಗ್‌ಸ್ಟರ್ ಫ್ರೆಂಡ್ಸ್ ಅಸೋಸಿಯೇಶನ್ ಅಧ್ಯಕ್ಷ ಟಿ. ಬದ್ರುದ್ದೀನ್, ಪಂಚಾಯತ್ ಕಾರ್ಯ ದರ್ಶಿ ಲಕ್ಷ್ಮೀಶ ಅವರ ಜತೆ ಠಾಣೆಯಲ್ಲಿ ಸಮಾಲೋಚನೆ ಮಾಡಿದರು.
‘ಕಟ್ಟಡ ನಿರ್ಮಾಣದ ಬಗ್ಗೆ ಆರಂಭದಲ್ಲಿ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಆದರೆ, ಇತ್ತೀಚೆಗೆ ಬಿಜೆಪಿ ಮತ್ತು ಬಜರಂಗ ದಳದ ಕಾರ್ಯಕರ್ತರು ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿ ಪಂಚಾಯತ್ ಕಾರ್ಯ ದರ್ಶಿಗೆ ಒತ್ತಡ ಹಾಕಿದ್ದಾರೆ. ಆದರೆ, ಕಾಮಗಾರಿ ಕಾನೂನು ಬದ್ಧವಾಗಿ ನಡೆಯುತ್ತಿರುವು ದರಿಂದ ಹತಾಶೆಗೊಂಡು ನೆಲಸಮ ಮಾಡುವ ಮೂಲಕ ತನ್ನ ಕೋಮು ಅಜೆಂಡಾವನ್ನು ಪಾಲಿಸಿದ್ದಾರೆ’ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಕೃತ್ಯವನ್ನು ಡಿವೈಎಫ್‌ಐ ಸ್ಥಳೀಯ ಘಟಕದ ಅಧ್ಯಕ್ಷ ಗಂಗಾಧರ ಖಂಡಿಸಿದ್ದು, ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ದೂರು ದಾಖಲು
ಯಂಗ್‌ಸ್ಟರ್ ಫ್ರೆಂಡ್ಸ್ ಅಸೋಸಿ ಯೇಶನ್ ಅಧ್ಯಕ್ಷ ಟಿ. ಬದ್ರುದ್ದೀನ್ ಪ್ರಕರಣದ ಬಗ್ಗೆ ದೂರು ನೀಡಿ, ಘಟನೆಯಿಂದ ೨೦ ಸಾವಿರ ರೂಪಾಯಿ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಕೃತ್ಯದ ಹಿಂದೆ ಗ್ರಾಮ ಪಂಚಾಯತ್ ಸದಸ್ಯ ಜಯರಾಮ ಪೂಜಾರಿ ಸಹಿತ ಹಲವರ ಕೈವಾಡವಿರುವ ಬಗ್ಗೆ ಶಂಕೆ ಇದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾ ಗಿದೆ ಎಂದು ಅಸೋಸಿಯೇಶನ್ ಕಾರ್ಯ ದರ್ಶಿ ಮುಸ್ತಫಾ ಪತ್ರಿಕೆಗೆ ತಿಳಿಸಿದ್ದಾರೆ.